ಸಮಯಕ್ಕೆ ಬೆಲೆ ಕಟ್ಟಲಾಗದು.

ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು 13 ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ದಿನಂಪ್ರತಿ ಬಳ್ಳಾರಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬಳ್ಳಾರಿಗೆ ಓಡಾಡಲೇಬೇಕಾದ ಅನಿವಾರ್ಯತೆಯಿತ್ತು. ನನ್ನ ಅಮೂಲ್ಯ ಸಮಯವನ್ನು ಜನಸೇವೆಗೆ ಮೀಸಲಿಡುವ ಕಾರಣದಿಂದ ನನ್ನ ಸ್ವಂತ ಹಣದಲ್ಲಿಯೇ ಒಂದು ಹೆಲಿಕಾಪ್ಟರ್ ಖರೀದಿಸಿದೆ. ಅದರ ನಿರ್ವಹಣೆಗಾಗಿ ತಗುಲುತ್ತಿದ್ದ ಎಲ್ಲಾ ವೆಚ್ಚವನ್ನು ನಾನೇ ಭರಿಸುತ್ತಿದ್ದೆ. ಕೇವಲ ಎರಡು ಗಂಟೆಗಳಲ್ಲೇ ಬೆಂಗಳೂರಿಗೆ ಬಂದು ವಿಧಾನಸೌಧದ ಸಚಿವಾಲಯದಲ್ಲಿನ ಕೆಲಸ ಕಾರ್ಯಗಳತ್ತ ಗಮನ ಹರಿಸುತ್ತಿದ್ದೆ. ಇನ್ನುಳಿದ ಸಮಯವನ್ನು ನಾನು ಜನಸೇವೆಗೆ ಮೀಸಲಿಡುತ್ತಿದ್ದೆ. ನಾನು ಹೆಲಿಕಾಪ್ಟರ್ ಖರೀದಿಸುವ ವೇಳೇಗಾಗಲೇ ನನ್ನ ತಾಯಿ ವಿಧಿವಶರಾಗಿದ್ದರು. ಅವರ ನೆನಪಿನಲ್ಲಿ ನಾನು ಕೊಂಡ ಹೆಲಿಕಾಪ್ಟರ್ ಗೆ “ರುಕ್ಮಿಣಿ” ಎಂದೇ ಹೆಸರಿಟ್ಟೆ.

Related posts

ಮೊದಲ ಮಾತು

ಮೊದಲ ಮಾತು

ಜನಸೇವೆಯೇ ನನ್ನ ಮೊದಲ ಆದ್ಯತೆಯಾದ್ದರಿಂದ ಜನರೊಡನೆ ನಿರಂತರ ಸಂಪರ್ಕ ಹೊಂದುವುದಕ್ಕೆ ಸದಾ ಬಯಸುತ್ತೇನೆ. ನಿಮ್ಮೆಲ್ಲರಿಗೂ ತಿಳಿದಂತೆ ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ...

Posted
ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು.

ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು.

2004 ರಲ್ಲಿ ಶ್ರೀರಾಮುಲು ಶಾಸಕರಾದರು. ನಮ್ಮಣ್ಣ ಸೋಮಶೇಖರ ರೆಡ್ಡಿ ಮೇಯರ್ ಆದರು. ದೊಡ್ಡಣ್ಣ ಕರುಣಾಕರ ರೆಡ್ಡಿ ಲೋಕಸಭಾ ಸದಸ್ಯರಾಗಿದ್ದರು. ಈ ಮಧ್ಯೆ ಶ್ರೀರಾಮುಲು ಜನಪ್ರಿಯತೆ...

Posted
ನನ್ನ ಪತ್ನಿಯ ಧೈರ್ಯಕ್ಕೆ ಸಲಾಂ

ನನ್ನ ಪತ್ನಿಯ ಧೈರ್ಯಕ್ಕೆ ಸಲಾಂ

ನನ್ನ ಪತ್ನಿ ಅರುಣಾದೇವಿ. ಅರುಣಾದೇವಿ ಎಂಬುದು ಆಕೆಯ ಮೂಲ ಹೆಸರು. ಮದುವೆಯ ನಂತರ ನನ್ನ ಹೆಸರಿಗೆ ಹೊಂದುವಂತೆ ಲಕ್ಷ್ಮೀ ಅರುಣಾ ಎಂದು ಬದಲಿಸಲಾಯಿತು.  ಕರ್ನೂಲು ಜಿಲ್ಲೆಯ ನಂದ್ಯಾಲ...

ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...

Posted

Leave a Reply