ನನ್ನ ಸಂಸ್ಥೆ ಬೆಳೆದಿದ್ದು ಜನಾಭಿಪ್ರಾಯದಿಂದಲೇ ಎಂದರೆ ತಪ್ಪಾಗಲಾರದು.

ಆ ಸಂದರ್ಭದಲ್ಲಿ ನಮ್ಮ ಕಂಪೆನಿಯ ಕೆಲಸ ಕಾರ್ಯಗಳಿಗಾಗಿ ಪ್ರಿಂಟಿಂಗ್‍ಗಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿತ್ತು. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾನೇ ಒಂದು ಪ್ರಿಂಟಿಂಗ್ ಪ್ರೆಸ್ ಆರಂಭಿಸಿದೆ. ಈ ನನ್ನ ಪ್ರಯತ್ನ ಬಹುದೊಡ್ಡ ಮಟ್ಟದ ವೆಚ್ಚವನ್ನು ತಗ್ಗಿಸಿತ್ತು. ನಂತರದ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನುಳ್ಳ ಆಫ್ ಸೆಟ್ ಪ್ರಿಂಟಿಂಗ್ ಪ್ರೆಸ್ ಕೂಡ ಆರಂಭವಾಯ್ತು. ಈ ಮಧ್ಯೆ ‘ಈ ನಮ್ಮ ಕನ್ನಡ ನಾಡು’ ಎಂಬ ದಿನ ಪತ್ರಿಕೆಯನ್ನು ಆರಂಭಿಸಿದೆ. ಆ ಪತ್ರಿಕೆ ಇಂದಿಗೂ ಬಹುಬೇಡಿಕೆಯ ಹಾಗೂ ಜನಮೆಚ್ಚುಗೆಯ ದಿನಪತ್ರಿಕೆಯಾಗಿ ಗುರುತಿಸಿಕೊಂಡಿದೆ. 1994 ರಿಂದ ಇಂದಿನ ತನಕ ‘ಈ ನಮ್ಮ ಕನ್ನಡ ನಾಡು’ ಪತ್ರಿಕೆ ದಿನಂಪ್ರತಿ ಹೆಚ್ಚು ಪ್ರಸಾರಣವಾಗುತ್ತಲೇ ಬಂದಿದೆ. ಯಶಸ್ವಿಯಾಗಿ 24 ವರ್ಷಗಳನ್ನು ಪೂರೈಸಿದೆ.

 

1989 ರಲ್ಲಿ ಸಾಮಾಜಿಕ ಸೇವೆ ಮಾಡುವ ಕನಸಿನೊಂದಿಗೆ ಎನೋಬಲ್ ಸಂಸ್ಥೆಯನ್ನು ಆರಂಭಿಸಿದೆ. 1992 ರಲ್ಲಿ ‘ವಿಶ್ವಭಾರತಿ ಕಳಾನಿಕೇತನ್ ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಆರಂಭಿಸಿದೆ. ಇದು ‘ಎನೋಬಲ್ ಸಂಸ್ಥೆ’ಯ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿತ್ತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸಂಸ್ಥೆಯ ನೌಕರರಲ್ಲಿದ್ದ ಪ್ರತಿಭೆಯನ್ನು ಪ್ರದರ್ಶಿಸಿಲು ಒಂದು ವೇದಿಕೆಯನ್ನು ಸೃಷ್ಟಿಸಿದೆ.

Related posts

ಟ್ರಾಕ್ ದಾಟಿ ಬೆಳೆದ ಸ್ನೇಹ ಸಂಬಂಧ

ಟ್ರಾಕ್ ದಾಟಿ ಬೆಳೆದ ಸ್ನೇಹ ಸಂಬಂಧ

ಪೊಲೀಸ್ ಕ್ವಾಟ್ರ್ರಸ್ ಪಕ್ಕದಲ್ಲಿಯೇ ರೈಲ್ವೆ ಟ್ರಾಕ್ ಇತ್ತು. ಅದರಾಚೆಗೆ ರೈಲ್ವೆ ಕ್ವಾಟ್ರ್ರಸ್ ಇತ್ತು. ಶ್ರೀರಾಮುಲು ಅವರ ತಂದೆ ಬಿ. ತಿಮ್ಮಪ್ಪನವರು ರೈಲ್ವೇ ಇಲಾಖೆಯಲ್ಲಿ...

Posted
ಮೊದಲ ಮಾತು

ಮೊದಲ ಮಾತು

ಜನಸೇವೆಯೇ ನನ್ನ ಮೊದಲ ಆದ್ಯತೆಯಾದ್ದರಿಂದ ಜನರೊಡನೆ ನಿರಂತರ ಸಂಪರ್ಕ ಹೊಂದುವುದಕ್ಕೆ ಸದಾ ಬಯಸುತ್ತೇನೆ. ನಿಮ್ಮೆಲ್ಲರಿಗೂ ತಿಳಿದಂತೆ ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ...

Posted
ಸಚಿವ ಸ್ಥಾನ ನಾನು ಬಯಸದೇ ಬಂದ ಭಾಗ್ಯ

ಸಚಿವ ಸ್ಥಾನ ನಾನು ಬಯಸದೇ ಬಂದ ಭಾಗ್ಯ

ನಾನು ಸಚಿವನಾಗಬಹುದು ಎಂದು ಕನಸು ಕಂಡವನಲ್ಲ. ನಾನು ಸಚಿವನಾಗಿದ್ದು ಸಹ ಅನಿರೀಕ್ಷಿತ ಸಂದರ್ಭದಲ್ಲಿ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ವಿಶೇಷ ಸಂಗತಿಯೆಂದರೆ ನಾನು...

Posted

Leave a Reply