ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ
ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು ಸಂಪಾದಿಸಿದ್ದಾನೆ ಎಂಬುದರ ಮೇಲೆ. ಚಿಕ್ಕಂದಿನಿಂದಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತಾ ಬಂದವನು. ನಮ್ಮ ಮನೆಯಲ್ಲಿದ್ದ ವಾತಾವರಣವೇ ನಮ್ಮನ್ನು ಹಾಗೆ ಬೆಳೆಸಿತ್ತು ಎಂದರೆ ತಪ್ಪಾಗಲಾರದು. ನನಗೆ ಅನೇಕ ಸ್ನೇಹಿತರಿದ್ದಾರೆ. ಆದರೆ ಬಾಲ್ಯದ ಗೆಳೆಯ ಎಂದಾಗ ನೆನಪಾಗುವ ಮೊದಲ ಗೆಳೆಯ ಪ್ರೇಮ್ಬಾಬು. ಆತ ಹುಟ್ಟಿ ಸ್ವಲ್ಪ ತಿಂಗಳು ಕಳೆಯುವಷ್ಟರಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಆತನ ಅಜ್ಜಿ ಮತ್ತು ಸೋದರ ಮಾವಂದಿರ ಪ್ರೀತಿಯಲ್ಲಿ ಬೆಳೆದ ಹುಡುಗ. ನಾನು ಎರಡನೇ ತರಗತಿಯಲ್ಲಿದ್ದಾಗ ಆತ ಗೆಳೆಯನಾದ. ಅಂದು ಆದ ಪರಿಚಯ ನನಗೊಬ್ಬ ಉತ್ತಮ ಸ್ನೇಹಿತ ಸಿಗಲು ಕಾರಣವಾಯ್ತು. 2ನೇ ತರಗತಿಯಿಂದ 10 ನೇ ತರಗತಿಯವರೆಗೂ ನಾವಿಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದೆವು. ನಮ್ಮ ನಡುವೆ ಒಂದು ಅವಿನಾಭಾವ ಬಂಧ ಬೆಳೆದಿತ್ತು. ಆ ದಿನಗಳಲ್ಲಿ ದಿನದ ಬಹುತೇಕ ಸಮಯವನ್ನು ಒಟ್ಟಿಗೆ ಕಳೆದೆವು. ಆಟ-ಪಾಠಗಳೆಡರಲ್ಲೂ ಆತ ಸಾಥಿಯಾಗಿದ್ದ. ಇಂದಿಗೂ ಆತ ನನ್ನ ಜೀವದ ಗೆಳೆಯ. ಆತನಿಗೆ ಹೆತ್ತವರಿಲ್ಲ ಎಂಬ ಕಾರಣಕ್ಕೆ ನನಗೆ ಆತನ ಮೇಲೆ ಅತಿ ಹೆಚ್ಚು ಪ್ರೀತಿ, ಸ್ನೇಹವಿತ್ತು. ಅದೇ ಸ್ನೇಹ ಹಲವು ದಶಕದ ನಂತರವೂ ಹಾಗೆ ಇದೆ. ಕಾನೂನು ಪದವಿ ಪಡೆದಿರುವ ಪ್ರೇಮ್ ಬಾಬು ಪ್ರಸ್ತುತ ಬಳ್ಳಾರಿಯಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ನಾನು ಮಂತ್ರಿಯಾದ ನಂತರವು ನನ್ನೆಲ್ಲಾ ಆತ್ಮೀಯ ಸ್ನೇಹಿತರನ್ನು ಮನೆಗೆ ಕರೆಸಿ ಅವರಿಗೆ ವಿಶೇಷ ಔತಣ ನೀಡಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಸತ್ಕರಿಸಿದ್ದೆ.
0 Comments
TRX_admin
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua