ಬಳ್ಳಾರಿಯೊಡನೆ ಬೆಸೆಯಿತು ಬಂಧ

ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು ಸಹ ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತ ಹೊಂದಿತ್ತು. ಪ್ರತ್ಯೇಕ ರಾಜ್ಯ ವಿಭಜನೆಯ ನಂತರ ಜನರಿಗೆ ತಮ್ಮ ವಾಸಯೋಗ್ಯ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವನ್ನು ಭಾರತ ಸರ್ಕಾರ ಜನಸಾಮಾನ್ಯರಿಗೆ ನೀಡುತ್ತದೆ. ಆಗ ಆಂಧ್ರ ಪ್ರದೇಶಕ್ಕೆ ಹೋಗುವ ಅವಕಾಶವಿದ್ದರೂ ನಮ್ಮ ತಂದೆ ಕನ್ನಡದ ಮೇಲಿನ ಪ್ರೀತಿಯಿಂದ ಮೈಸೂರಿಗೆ ಬಂದರು. ಎರಡು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಆ ನಂತರ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಮೂರು ರಾಜ್ಯಗಳಾಗಿ ವಿಭಜನೆಯಾಗುತ್ತದೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪೊಲೀಸ್ ಆಗಿ ಸೇವೆ ಸಲ್ಲಿಸಲು ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಸಿಕ್ಕಿತು. ಆ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಬಳ್ಳಾರಿಗೆ ವರ್ಗಾವಣೆ ಕೋರಿದರು. ಹೀಗೆ ಬಳ್ಳಾರಿ ಮಣ್ಣಿನೊಡನೆ ನಮ್ಮ ಕುಟುಂಬದ ನಂಟು ಆರಂಭವಾಯ್ತು.

ನಮ್ಮ ತಂದೆಯ ಪೂರ್ವಿಕರು ಸುಸಂಸ್ಕೃತರು ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ನಮ್ಮ ತಾತ ಮುತ್ತಾತಂದಿರು ತಿರುಪತಿಯಲ್ಲಿ ಜಮೀನ್ದಾರರಾಗಿದ್ದರು. ದಾನ-ಧರ್ಮದಿಂದಲೇ ಎಲ್ಲವನ್ನು ಕಳೆದುಕೊಂಡ ಮನೆತನ. ನಮ್ಮ ತಾತ ರಾಮರೆಡ್ಡಿಯವರು ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಹೋರಾಟ ಮಾಡಿದವರು. ಬದಲಾದ ಸನ್ನಿವೇಶದಲ್ಲಿ ನಮ್ಮ ತಂದೆ ಸ್ವತಂತ್ರವಾಗಿ ದುಡಿಯುವ ಗುರಿಯೊಂದಿಗೆ ಚೆನ್ನೈಗೆ ಬಂದರು. ಅಲ್ಲಿ ತಂದೆ ನಮ್ಮ ತಂದೆ ಚೆಂಗಾ ರೆಡ್ಡಿ ಪೊಲೀಸ್ ಇಲಾಖೆಗೆ ಆಯ್ಕೆಯಾದರು. 1983 ರ ತನಕ ಅಪ್ಪ ಆರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿಯಾಗುವ ವೇಳೆಯಲ್ಲಿ ಹೆಡ್ ಕಾನ್‍ಸ್ಟೇಬಲ್ ಆಗಿದ್ದರು. ನಮ್ಮ ತಂದೆ ಶಿಸ್ತಿನ ಸಿಪಾಯಿ ಅಂದರೆ ತಪ್ಪಾಗಲಾರದು. ಇನ್ನು ನನ್ನ ತಾಯಿ ರುಕ್ಮಿಣಿ ಗೃಹಿಣಿ. ನಮ್ಮ ಅಪ್ಪ-ಅಮ್ಮನ ನಡುವಿನ ಒಡನಾಟ ಅದ್ಭುತವಾಗಿತ್ತು. ಕಷ್ಟ-ಸುಖಗಳೆರಡನ್ನು ಒಟ್ಟಿಗೆ ನಿಭಾಯಿಸಿದ ಜೋಡಿಜೀವ. ನಮ್ಮ ತಂದೆ- ತಾಯಿಗೆ ನಾವು ನಾಲ್ವರು ಮಕ್ಕಳು. ಅಕ್ಕ ರಾಜೇಶ್ವರಿ ಹಿರಿಯಾಕೆ. ಆ ಬಳಿಕ ಕ್ರಮವಾಗಿ ಅಣ್ಣಂದಿರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ನಾನು ಜನಿಸಿದೆವು.

Related posts

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಸಿನಿಮಾ ವಿಷಯ ಬಂದಾಗ ಬಳ್ಳಾರಿಯ ಜನರು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಒಂದೆಡೆ ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು...

ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...

ಅಪ್ಪ ನಮ್ಮನ್ನು ಮೆಚ್ಚಿ ಬೆನ್ನು ತಟ್ಟಿದ್ದು ಈ ಕಾರಣಕ್ಕೆ

ಅಪ್ಪ ನಮ್ಮನ್ನು ಮೆಚ್ಚಿ ಬೆನ್ನು ತಟ್ಟಿದ್ದು ಈ ಕಾರಣಕ್ಕೆ

ಬಳ್ಳಾರಿಯ ಸಂಸ್ಕೃತಿಯ ಸೊಗಡಿತ್ತು. ಪ್ರತಿ ಹಳ್ಳಿಗೂ ಒಂದು ತಾಂಡ ಇರುತ್ತಿತ್ತು. ನಮ್ಮ ಅನೇಕ ಸ್ನೇಹಿತರು ಆ ತಾಂಡಾಗಳಲ್ಲೇ ವಾಸಿಸುತ್ತಿದ್ದರು. ಇನ್ನು ಅವರಲ್ಲಿ ಕೆಲವರಿಗೆ...

Leave a Reply