ಸಮಯಕ್ಕೆ ಬೆಲೆ ಕಟ್ಟಲಾಗದು.
ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು 13 ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ದಿನಂಪ್ರತಿ ಬಳ್ಳಾರಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬಳ್ಳಾರಿಗೆ ಓಡಾಡಲೇಬೇಕಾದ ಅನಿವಾರ್ಯತೆಯಿತ್ತು. ನನ್ನ ಅಮೂಲ್ಯ ಸಮಯವನ್ನು ಜನಸೇವೆಗೆ ಮೀಸಲಿಡುವ ಕಾರಣದಿಂದ ನನ್ನ ಸ್ವಂತ ಹಣದಲ್ಲಿಯೇ ಒಂದು ಹೆಲಿಕಾಪ್ಟರ್ ಖರೀದಿಸಿದೆ. ಅದರ ನಿರ್ವಹಣೆಗಾಗಿ ತಗುಲುತ್ತಿದ್ದ ಎಲ್ಲಾ ವೆಚ್ಚವನ್ನು ನಾನೇ ಭರಿಸುತ್ತಿದ್ದೆ. ಕೇವಲ ಎರಡು ಗಂಟೆಗಳಲ್ಲೇ ಬೆಂಗಳೂರಿಗೆ ಬಂದು ವಿಧಾನಸೌಧದ ಸಚಿವಾಲಯದಲ್ಲಿನ ಕೆಲಸ ಕಾರ್ಯಗಳತ್ತ ಗಮನ ಹರಿಸುತ್ತಿದ್ದೆ. ಇನ್ನುಳಿದ ಸಮಯವನ್ನು ನಾನು ಜನಸೇವೆಗೆ ಮೀಸಲಿಡುತ್ತಿದ್ದೆ. ನಾನು ಹೆಲಿಕಾಪ್ಟರ್ ಖರೀದಿಸುವ ವೇಳೇಗಾಗಲೇ ನನ್ನ ತಾಯಿ ವಿಧಿವಶರಾಗಿದ್ದರು. ಅವರ ನೆನಪಿನಲ್ಲಿ ನಾನು ಕೊಂಡ ಹೆಲಿಕಾಪ್ಟರ್ ಗೆ “ರುಕ್ಮಿಣಿ” ಎಂದೇ ಹೆಸರಿಟ್ಟೆ.