ಸತ್ಯ ದರ್ಶನ
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನ ಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ ನನ್ನನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಸುಳ್ಳುಗಳನ್ನೆ ನೂರು ಬಾರಿ ಹೇಳಿ ನನ್ನ ಗೌರವಕ್ಕೆ, ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡಿದವು. ಕೆಲವು ಮಾಧ್ಯಮಗಳು ಸಹ ಅತ್ಯಂತ ಕೆಳಹಂತಕ್ಕೆ ಇಳಿದು ನನ್ನನ್ನು ನಿಂದಿಸಿದವು. ಸತ್ಯವನ್ನು ಮರೆಮಾಚಿ ಸುಳ್ಳಿನ ಸರಮಾಲೆಯನ್ನೇ ಪ್ರಕಟಿಸಿದವು. ಇಷ್ಟಾಗಿಯೂ ಕೊನೆಗೆ ಗೆದ್ದದ್ದು ಸತ್ಯವೇ. ನ್ಯಾಯಕ್ಕೆ ಅಂತಿಮವಾದ ಗೆಲುವು ಸಿಕ್ಕಿದೆ, ಇಂದು ನನ್ನ ಮೇಲಿದ್ದ ಶೇಕಡಾ 90% ಕೇಸುಗಳು ಮುಕ್ತಾಯವಾಗಿದ್ದು, ‘ನಾನು ನಿರ್ದೋಷಿ’ ಎಂಬ ತೀರ್ಪು ಹೊರ ಬಿದ್ದಿದೆ. ಸತ್ಯಕ್ಕಿರುವ ಶಕ್ತಿಯೇ ಅಂಥದ್ದು. ಅದು ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ. ಎಲ್ಲ ಸವಾಲನ್ನು ಮೀರಿ ಗೆಲ್ಲುತ್ತದೆ. ಮುಂಬರುವ ದಿನಗಳಲ್ಲಿ ನಾನು ಜನತೆಗೆ ಸತ್ಯ ದರ್ಶನ ಮಾಡಿಸಲಿದ್ದೇನೆ. ಅಲ್ಲದೇ ಸಾಕ್ಷಿಸಹಿತವಾಗಿ ವಿರೋಧಿಗಳ ಎಲ್ಲಾ ಆರೋಪಗಳಿಗೆ ಸಮರ್ಥ ಉತ್ತರವನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ನೀಡಲಿದ್ದೇನೆ.