ಶಾರದಾ ಟೀಚರ್ ನನ್ನ ರೋಲ್ ಮಾಡೆಲ್

ನನ್ನ ಬಳ್ಳಾರಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು, ಒಂದು ವರ್ಷ ಮಾತ್ರ ಹೊಸಪೇಟೆಯಲ್ಲಿ ಓದಿದೆ. ಆ ಸಂದರ್ಭದಲ್ಲಿ ನಮ್ಮ ತಂದೆಗೆ ವರ್ಗಾವಣೆಯಾಗಿತ್ತು. 6 ನೇ ತರಗತಿಯನ್ನು ಹೊಸಪೇಟೆಯಲ್ಲಿ ಓದಿದ್ದೆ. ಶಾಲೆ, ಸ್ಥಳ ಬದಲಾಗಿದ್ದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಹೊಸ ಜಾಗ, ಹೊಸ ಶಾಲೆಗೆ ಹೊಂದುಕೊಳ್ಳುವುದು ಕಷ್ಟವಾಗಿ ಹೋಗಿತ್ತು. ಆ ಸಂದರ್ಭದಲ್ಲಿ ನಾನು ಪರೀಕ್ಷೆಗೂ ಸಹ ಮನಸ್ಸಿಟ್ಟು ಓದಿರಲಿಲ್ಲ. ಪರೀಕ್ಷೆಯ ವೇಳೆ ಏನು ಬರೆಯದೇ ಸುಮ್ಮನೆ ಕುಳಿತಿದ್ದೆ. ಆಗ ಶಾರದಾ ಮೇಡಮ್ ನನ್ನ ಬಳಿ ಬಂದು ‘ಏಕೆ ನೀನು..   ಏನನ್ನು ಬರೆಯುತ್ತಿಲ್ಲ..?  ಎಂದು ಕಾರಣ ಕೇಳಿದರು. ನಾನು ನೇರವಾಗಿ ‘ಪರೀಕ್ಷೆಗೆ ಸಿದ್ದನಾಗಿಲ್ಲ’ ಎಂದು  ನೇರವಾಗಿ ಹೇಳಿಬಿಟ್ಟೆ. ಅದನ್ನು ಕೇಳಿ ಕೋಪಗೊಂಡ ಶಾರದಾ ಮೇಡಂ ನನ್ನನ್ನು ಮನಸೋ ಇಚ್ಛೆ ಹೊಡೆದುಬಿಟ್ಟರು. ನಾನು ಶಾಲೆಯಲ್ಲಿ ಬ್ಯಾಗ್, ಪುಸ್ತಕ ಎಲ್ಲವನ್ನು ಬಿಟ್ಟು ನಮ್ಮ ತಂದೆಯಿದ್ದ ಪೊಲೀಸ್ ಠಾಣೆಗೆ ಬಂದು ನನಗಾದ ಗಾಯಗಳನ್ನು ತೋರಿಸಿದೆ. ನನಗಾದ ಗಾಯಗಳನ್ನು ನೋಡಿ ನಮ್ಮ ತಂದೆ ಕಣ್ಣಲ್ಲಿ ಅಕ್ಷರಶಃ ನೀರಾಡಿತು. ಆಗ ನಮ್ಮ ತಂದೆ ನನ್ನ ಸೈಕಲ್ಲಿನಲ್ಲಿ ಕೂರಿಸಿಕೊಂಡು ಮತ್ತೆ ಶಾಲೆಗೆ ಕರೆದುಕೊಂಡು ಬಂದರು. ಆಗ ಅಲ್ಲಿ ಬಹದ್ದೂರ್ ಶೇಷಗಿರಿ ರಾವ್ ಎಂಬ ಶಿಕ್ಷಕರಿದ್ದರು. ಅವರಿಗೆ ಪ್ರೆಸಿಡೆಂಟ್ ಅವಾರ್ಡ್ ಸಹ ಸಿಕ್ಕಿತ್ತು. ಅವರ ಬಳಿಯಲ್ಲಿ ನಮ್ಮ ತಂದೆ ನಡೆದ ವಿಷಯವನ್ನು ತಿಳಿಸಿದರು. ನನ್ನ ಮಗ ತುಂಬಾ ಚೆನ್ನಾಗಿ ಓದುತ್ತಾನೆ. ನಾನು ಬೇರೆಡೆಯಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದ ಕಾರಣ ಆತ ಕೊಂಚ ವಿಚಲಿತನಾಗಿದ್ದಾನೆ. ಆ ಕಾರಣಕ್ಕೆ ಆತ ತಾನು ಓದಲಾಗಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಹೇಳಿದ್ದಾನೆ. ಹೀಗಿದ್ದು ಹೊಡೆದರೆ ಆತ ಮುಂದೆ ‘ಸುಳ್ಳು ಹೇಳುವುದನ್ನು ಕಲಿಯಬಹುದು’ ಎಂದರು. ಆತನ ಸಮಸ್ಯೆ ತಿಳಿಯದೇ ಹೀಗೆ ಹೊಡೆಯುವುದು ತಪ್ಪಲ್ಲವೇ ಎಂದು ಕೇಳಿದರು. ಅನಂತರ ಮುಖ್ಯ ಶಿಕ್ಷಕರು ಶಾರದಾ ಟೀಚರ್ ಅವರನ್ನು ಕರೆಸಿ ವಿಷಯ ತಿಳಿಸಿದರು. ನನಗೆ ಅವಮಾನ ಮಾಡಿಸಿದ ಎಂದು ತಪ್ಪೆಣಿಸದೆ ನನಗೆ ಮಾರ್ಗದರ್ಶಕರಾದರು. “ಮಾನವಸೇವೆ ಮಾಧವಸೇವೆ” ಹೆಸರಿನಲ್ಲಿ ನಡೆದ ಆಶುಭಾಷಣ ಸ್ಪರ್ಧೆಗೆ ಅವರೇ ಭಾಷಣ ಬರೆದುಕೊಟ್ಟು ನಾನು ಸ್ಪರ್ಧಿಸುವಂತೆ ಮಾಡಿದರು. ನಿನ್ನ ಧೈರ್ಯ ಮತ್ತು ನೇರವಂತಿಕೆಯನ್ನು ಮೆಚ್ಚಿ ಈ ಅವಕಾಶ ನೀಡುತ್ತಿದ್ದೇನೆ ಎಂದರು. ಅವರೇ ನನ್ನ ರೋಲ್ ಮಾಡೆಲ್. ಇವತ್ತಿಗೂ ಅವರು ಬಳ್ಳಾರಿಯಲ್ಲಿ ವಾಸವಿದ್ದು.. ಸಂದರ್ಭ ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಿರುತ್ತೇನೆ. ನಾನು ಇಂದು ರಾಜಕೀಯ ಎಷ್ಟೇ ಬೆಳೆದಿದ್ದರೂ, ಆರ್ಥಿಕವಾಗಿ ಎಷ್ಟೇ ಸುಸ್ಥಿತಿಯಲ್ಲಿದ್ದರೂ ಬಳ್ಳಾರಿ ನೀಡುವ ನೆಮ್ಮದಿ, ಖುಷಿ ಬೇರೆಲ್ಲೂ ಸಿಗುವುದಿಲ್ಲ. ನಾನು ಯಾವುದೇ ರಾಜ್ಯಕ್ಕೆ, ದೇಶಕ್ಕೆ ಹೋದರೂ ನನ್ನ ಮನಸ್ಸು ಮಾತ್ರ ಬಳ್ಳಾರಿಯಲ್ಲಿಯೇ ಇರುತ್ತದೆ. ವಿದೇಶಗಳಲ್ಲಿನ ಅಧುನಿಕತೆ, ವೈಶಿಷ್ಟತೆಗಳನ್ನು ನೋಡಿದಾಗ ನಮ್ಮ ಬಳ್ಳಾರಿಯನ್ನು ಸಹ ಹೀಗೆ ಅಭಿವೃದ್ಧಿ ಮಾಡಬೇಕೆಂಬ ಕನಸು ನನ್ನೊಳಗೆ ಜಾಗೃತವಾಗುತ್ತದೆ.

Related posts

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಸಿನಿಮಾ ಮೇಲಿನ ನನ್ನ ಮೋಹ ಎಷ್ಟರ ಮಟ್ಟಿಗೆ ಇದೆಯೆಂದರೆ ನಾನು ಮಂತ್ರಿಯಾದ ಬಳಿಕವು ನನ್ನ ಬಹು ನಿರೀಕ್ಷೆಯ ಚಿತ್ರಗಳು ತೆರೆ ಕಂಡಾಗ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದುಂಟು. ಆದರೆ...

ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು...

Posted
ಬಳ್ಳಾರಿಯೊಡನೆ ಬೆಸೆಯಿತು ಬಂಧ

ಬಳ್ಳಾರಿಯೊಡನೆ ಬೆಸೆಯಿತು ಬಂಧ

ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು...

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಸಿನಿಮಾ ವಿಷಯ ಬಂದಾಗ ಬಳ್ಳಾರಿಯ ಜನರು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಒಂದೆಡೆ ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು...

Leave a Reply