ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ
ನಾನು ಸಿನಿಮಾ ನೋಡುವ ಸಲುವಾಗಿ ಅನೇಕ ಬಾರಿ ಚಿತ್ರಮಂದಿರಕ್ಕೆ ತೆರಳಿದಾಗ ಒಂದು ವಿಚಾರ ನನ್ನನ್ನು ಬಹುಆಗಿ ಬಾಧಿಸುತ್ತದೆ. ಚಿತ್ರ ಪ್ರದರ್ಶನ ಆರಂಭವಾಗುವ ಮೊದಲು ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂಬ ನಿಯಮವಿದೆ. ಚಿತ್ರಮಂದಿರಗಳು ನಿಯಮಾನುಸಾರವಾಗಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದರೂ ಪ್ರತಿಯೊಬ್ಬರು ಆ ನಿಯಮವನ್ನು ಪಾಲಿಸುತ್ತಿಲ್ಲ. ಕೆಲವು ನಾಗರೀಕರು ಒಂದು ನಿಮಿಷ ಕಾಲ ಎದ್ದು ನಿಂತು ನಮಗೆ ನೆಲ, ಜಲ, ಬದುಕು ಕೊಟ್ಟ ದೇಶಕ್ಕೆ ಗೌರವ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ನಮ್ಮ ದೇಶವನ್ನು, ಭಾಷೆಯನ್ನು, ಸಂಸ್ಕೃತಿಯನ್ನು, ಕಾನೂನನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.