ಮೊದಲ ಮಾತು

ಜನಸೇವೆಯೇ ನನ್ನ ಮೊದಲ ಆದ್ಯತೆಯಾದ್ದರಿಂದ ಜನರೊಡನೆ ನಿರಂತರ ಸಂಪರ್ಕ ಹೊಂದುವುದಕ್ಕೆ ಸದಾ ಬಯಸುತ್ತೇನೆ. ನಿಮ್ಮೆಲ್ಲರಿಗೂ ತಿಳಿದಂತೆ ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಮೊದಲು ಹೊಸ ಕಿಚ್ಚು ಹಚ್ಚುವುದರಿಂದ ಆರಂಭವಾಗಿ ಜನರ ಕಷ್ಟ ಸುಖಗಳನ್ನ, ಸಮಾಜದ ಅಂಕು-ಡೊಂಕುಗಳನ್ನ ತಿದ್ದುವಲ್ಲಿ ಪತ್ರಿಕೆಗಳು ಮಹತ್ತರ ಕೆಲಸ ಮಾಡಿದ್ದೆವು. ನಂತರದ ದಿನಗಳಲ್ಲಿ ಟಿವಿ ವಾಹಿನಿಗಳಿಂದ ಆ ಬದಲಾವಣೆಗೆ ಮತ್ತಷ್ಟು ವೇಗ ದೊರಕಿತು. ಈಗ ಕಾಲ ಬದಲಾಗಿದೆ. ಮೊಬೈಲ್ ಪ್ರಪಂಚವನ್ನು ಚಿಕ್ಕದಾಗಿಸಿದೆ. ಪ್ರಪಂಚ ಶ್ರೀಸಾಮಾನ್ಯರ ಬೆರಳ ತುದಿಯಲ್ಲಿದೆ. ಫೇಸ್ ಬುಕ್  ಟ್ವಿಟ್ಟರ್, ಇನ್‍ಸ್ಟಾಗ್ರಾಂ ಸೇರಿದಂತೆ ಹತ್ತು ಹಲವು ಜಾಲತಾಣಗಳು ಪ್ರಪಂಚದ ಆಗು-ಹೋಗುಗಳನ್ನು ಕ್ಷಣ ಕ್ಷಣಕ್ಕೂ ಜನರಿಗೆ ತಲುಪಿಸುತ್ತದೆ. ಕಾಲಕ್ಕೆ ನಾವು ಬದಲಾಗಬೇಕಿದೆ. ನನ್ನ ಜನರೊಡನೆ, ನನ್ನೆಲ್ಲಾ ಆತ್ಮೀಯರೊಡನೆ ನಿರಂತರ ಸಂಪರ್ಕ ಹೊಂದಲು ನನ್ನ ಈ ವೆಬ್‍ಸೈಟ್ ವೇದಿಕೆಯಾಗಿದೆ.

 

ನನ್ನ ವಿಷಯದಲ್ಲಿ ಹೇಳುವುದಾದರೆ ಅನೇಕ ಬಾರಿ ಕಪೋಲ ಕಲ್ಪಿತ ವರದಿಗಳೇ ಮಾಧ್ಯಮಗಳಲ್ಲಿ ಹೆಚ್ಚು ಬಿತ್ತರವಾಗಿದೆ. ಸತ್ಯ ಶೋಧಿಸುವ ಕೆಲಸ ಯಾರೊಬ್ಬರಿಂದಲೂ ಆಗಿಲ್ಲವೆಂದೇ ಹೇಳಬಹುದು. ಈ ವೆಬ್‍ಸೈಟ್ ನೇರ ಮತ್ತು ನಿಖರ ವಿಷಯಗಳನ್ನು ತಿಳಿಸುವುದರೊಂದಿಗೆ ಸತ್ಯದ ಮೇಲೆ ಬೆಳಕು ಚೆಲ್ಲಲಿದೆ. ನಿಮ್ಮ ಎಲ್ಲಾ ಗೊಂದಲಗಳಿಗೆ ನಾನೇ ನೇರವಾಗಿ ಉತ್ತರಿಸಲಿದ್ದೇನೆ. ನೇರ ಸಂವಹನಕ್ಕೆ ಸಮರ್ಥ ಸಂಪರ್ಕ ಸಾಧನ ಈ ವೆಬ್‍ಸೈಟ್.

Related posts

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...

Posted
ಸಮಯಕ್ಕೆ ಬೆಲೆ ಕಟ್ಟಲಾಗದು.

ಸಮಯಕ್ಕೆ ಬೆಲೆ ಕಟ್ಟಲಾಗದು.

ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು 13 ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು...

Posted

Leave a Reply