ನನ್ನ ಪತ್ನಿಯ ಧೈರ್ಯಕ್ಕೆ ಸಲಾಂ

ನನ್ನ ಪತ್ನಿ ಅರುಣಾದೇವಿ. ಅರುಣಾದೇವಿ ಎಂಬುದು ಆಕೆಯ ಮೂಲ ಹೆಸರು. ಮದುವೆಯ ನಂತರ ನನ್ನ ಹೆಸರಿಗೆ ಹೊಂದುವಂತೆ ಲಕ್ಷ್ಮೀ ಅರುಣಾ ಎಂದು ಬದಲಿಸಲಾಯಿತು.  ಕರ್ನೂಲು ಜಿಲ್ಲೆಯ ನಂದ್ಯಾಲ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿ ಹುಟ್ಟಿ ಬೆಳೆದಾಕೆ. ಆಕೆಯ ಕುಟುಂಬದ ಹಿನ್ನೆಲೆ ತುಂಬಾನೇ ಜೋರಾಗಿದೆ. ರಾಜಕೀಯವಾಗಿ ಹೆಸರುವಾಸಿಯಾದವರು ಹಾಗೂ ಉನ್ನತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದವರು ಇದ್ದಂತಹ ಮನೆತನ. ಮಾಜಿ ರಾಷ್ಟ್ರಪತಿಗಳಾದ ಶ್ರೀ ನೀಲಂ ಸಂಜೀವ ರೆಡ್ಡಿ ವರಸೆಯಲ್ಲಿ ನನ್ನ ಪತ್ನಿಗೆ ತಾತನಾಗುತ್ತಾರೆ. ಗ್ರಾಮೀಣ ಭಾಗದಿಂದ ಬಂದಿದ್ದರೂ ಕರ್ನೂಲ್ ಜಿಲ್ಲೆಯಲ್ಲಿ ಅತ್ಯಂತ ಗೌರವ ಕಾಪಾಡಿಕೊಂಡು ಬಂದ ಕುಟುಂಬ. ತೆಲುಗು ಆಕೆಯ ಮಾತೃಭಾಷೆ. ಆಕೆ ನನ್ನನ್ನು ವಿವಾಹವಾದ ದಿನದಿಂದ ಇಂದಿನ ತನಕ ಪ್ರತಿ ಹೆಜ್ಜೆಯಲ್ಲೂ ಸ್ಪೂರ್ತಿಯ ಚಿಲುಮೆಯಾಗಿರುವಾಕೆ. ನಮ್ಮನೆಗೆ ಸೊಸೆಯಾಗಿ ಬಂದ ಬಳಿಕ ಕನ್ನಡ ಮಾತನಾಡುವುದನ್ನು ಕಲಿತಳು. ಮನೆಯ ಜವಾಬ್ದಾರಿಯನ್ನು ತುಂಬಾನೇ ಅಚ್ಚುಕಟ್ಟಾಗಿ ನಿಭಾಯಿಸಿದಾಕೆ. ನನ್ನ ಪತ್ನಿಯ ಧೈರ್ಯ ಸ್ಥೈರ್ಯದ ಪರಿಚಯ ಹೊರ ಜಗತ್ತಿಗೆ ಆಗಿದ್ದು ನಾನು ಜೈಲಿಗೆ ಹೋದಂತಹ ಸಂದರ್ಭದಲ್ಲಿ ಎಂದರೆ ತಪ್ಪಾಗಲಾರದು. ನನ್ನ ವಿರೋಧಿಗಳೆಲ್ಲ ಸುಳ್ಳು ಆಪಾದನೆಗಳ ಸರಮಾಲೆ ಮಾಡಿ ಕೇಸ್ ಮೇಲೆ ಕೇಸ್ ಹಾಕುತ್ತಿದ್ದ ದಿನಗಳವು. ನನ್ನನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಗಿಸಲು ದೊಡ್ಡ ಹುನ್ನಾರ ನಡೆದಿತ್ತು. ಆ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಧೈರ್ಯ ತುಂಬಿ, ನನ್ನ ಸಂಸ್ಥೆಯನ್ನು, ಕಾರ್ಮಿಕರನ್ನು ಕಾಪಾಡಿದ್ದು ಆಕೆಯೇ ಎಂದರೆ ಅತೀಶಯೋಕ್ತಿಯಲ್ಲ. ಚಿಕ್ಕಂದಿನಿಂದಲೂ ನಮ್ಮ ಮಕ್ಕಳು ಕಷ್ಟ ನೋಡದಂತೆ ಬೆಳೆಸಿದ್ದೆವು. ಈ ಮಧ್ಯೆ ನಾನು ಜೈಲು ಸೇರುವಾಗ ನನ್ನ ಮಗಳು 10 ನೇ ತರಗತಿಯಲ್ಲಿದ್ದಳು. ಮಗನಿಗಿನ್ನು ಚಿಕ್ಕ ವಯಸ್ಸು. ಅಷ್ಟಾದರೂ ನನ್ನ ಪತ್ನಿ ತನ್ನ ನೋವನ್ನು ಅದುಮಿಟ್ಟುಕೊಂಡು ನನ್ನ ಅನುಪಸ್ಥಿತಿಯಲ್ಲಿ ಕುಟುಂಬ, ಉದ್ಯಮ ಸೇರಿದಂತೆ ಎಲ್ಲವನ್ನು ನಿಭಾಯಿಸಿದಳು. ಮಕ್ಕಳಿಗೆ ಕಷ್ಟ-ಸುಖವನ್ನು ಪರಿಚಯಿಸಿದಳು. ರಾಯಲ್ ಲೈಫ್ ಲೀಡ್ ಮಾಡುತ್ತಿದ್ದವರಿಗೆ ನಾರ್ಮಲ್ ಲೈಫ್  ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಟ್ಟಳು. ಇದರ ಪರಿಣಾಮ ಅವರ ನನ್ನ ಅನುಪಸ್ಥಿತಿಯಲ್ಲೂ ಓದಿನಲ್ಲಿ ಹಿಂದೆ ಬೀಳಲಿಲ್ಲ. ಮಗಳು ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಳು. ಮಗನು ಕೂಡ ಅತ್ಯುತ್ತಮ ಅಂಕಗಳೊಂದಿಗೆ ನಮಗೆ ಕೀರ್ತಿ ತಂದ. ಆಕೆಯ ಆತ್ಮವಿಶ್ವಾಸಕ್ಕೆ ನಾನು ಸದಾ ಅಭಿಮಾನಿ.

Related posts

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...

Posted
ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಸಾಧನೆ

ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಸಾಧನೆ

1990 ರ ಜನವರಿಯಲ್ಲಿ ನಮ್ಮ ತಂದೆ ತೀರಿಕೊಂಡರು. ಅದೇ ವರ್ಷ ನನ್ನ ಸ್ನೇಹಿತ ಶ್ರೀರಾಮುಲು ಅವರ ಸೋದರಮಾವನವರ ಹತ್ಯೆಯಾಯ್ತು. ಈ ಮಧ್ಯೆ ನಾನು ಹಂತ ಹಂತವಾಗಿ ಉದ್ಯಮಿಯಾಗಿ ಬೆಳೆದೆ...

Posted

Leave a Reply