ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದ್ದರು. ಚಿಕ್ಕವನು ಎಂಬ ಕಾರಣಕ್ಕೆ ನನ್ನ ಮನೆಯವರೆಲ್ಲರೂ ನನ್ನ ಕುರಿತಾಗಿ ಹೆಚ್ಚು ಕಾಳಜಿ ವಹಿಸುತ್ತಿದ್ದರು. ನಾನು ಮೂರನೇ ವಯಸ್ಸಿನಲ್ಲಿರುವಾಗಲೇ ಅಪ್ಪ-ಅಮ್ಮ ನನಗೆ ಮನೆಪಾಠ ಆರಂಭಿಸಿದರು. ಇದರಿಂದಾಗಿ ನಾನು ಆರನೇ ವಯಸ್ಸಿಗೆ ಬರುವ ವೇಳೆಗಾಗಲೇ ಓದಿನ ವಿಷಯದಲ್ಲಿ ಚುರುಕಾಗಿದ್ದೆ. ನಮ್ಮ ತಂದೆಯವರು ನನ್ನನ್ನು ಒಂದನೇ ತರಗತಿ ಸೇರಿಸಲು ಕರೆದು ಹೋದಾಗ ಶಿಕ್ಷಕರ ಎದುರು ನನ್ನನ್ನು ನಿಲ್ಲಿಸಿ ನನ್ನ ಮಗನಿಗೆ ನೀವು ಹೇಗೆ ಬೇಕಾದರೂ ಪರೀಕ್ಷಿಸಿ ಆತನನ್ನು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿ ಸಮನಾಗಿ ಟ್ರೈನ್ ಮಾಡಿದ್ದೇನೆ ಎಂದರು. ಆಗ ನನ್ನನ್ನು ಪರೀಕ್ಷಿಸಿದ ಶಿಕ್ಷಕರು ನನ್ನ ಪ್ರತಿಭೆ ಮೆಚ್ಚಿ ನೇರವಾಗಿ ನನ್ನನ್ನು ಎರಡನೇ ತರಗತಿಗೆ ಸೇರಿಸಿಕೊಂಡರು. ಹೀಗೆ ಓದು ಮತ್ತು ಆದರ್ಶದ ವಿಷಯ ಬಂದಾಗ ಅಪ್ಪನೇ ನನ್ನ ಮೊದಲ ಗುರು. ಹರಪನಹಳ್ಳಿ ಸಮೀಪದಲ್ಲಿರುವ ಹಲವಾಗಿಲು ಗ್ರಾಮದಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದೆ. ಚಿಕ್ಕಂದಿನಿಂದಲೂ ನನಗೆ ಹಠ ಜಾಸ್ತಿ. ಆಟ-ಪಾಠದಲ್ಲಿ ಗೆಲ್ಲಲೇಬೇಕೆಂಬ ಕನಸಿತ್ತು. ಅದರಲ್ಲೂ ವಿಶೇಶವಾಗಿ ಆಟಗಳಲ್ಲಿ ಸೋಲುವುದನ್ನು ಒಪ್ಪಿಕೊಳ್ಳಲು ಸಿದ್ದನಿರುತ್ತಿರಲಿಲ್ಲ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೋ-ಕೋ, ಚಿನ್ನಿ ದಾಂಡು, ಬುಗುರಿ, ಗೋಲಿಯಾಟ ಸೇರಿದಂತೆ ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದೆ. ನಮ್ಮ ಮನೆ ಪೊಲೀಸ್ ಕ್ವಾಟರ್ಸ್‍ನಲ್ಲಿ ಇದ್ದದ್ದರಿಂದ ಅಲ್ಲಿನ ವಾತಾವರಣವೇ ಹೊಸತೊಂದು ಅನುಭವ ನೀಡುತ್ತಿತ್ತು. ಹಲವಾಗಿಲು ಗ್ರಾಮದಲ್ಲಿ ನಿಜಲಿಂಗಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಸುಸಜ್ಜಿತ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣ ಮಾಡಿಸಿದ್ದರು. ಪೊಲೀಸ್  ಮಕ್ಕಳು ಎಂಬ ಕಾರಣಕ್ಕೆ ನಮಗೆ ಕನಿಷ್ಠ ಸೌಲಭ್ಯಗಳು ಪೊಲೀಸ್ ಕ್ವಾರ್ಟರ್ಸ್ ನಲ್ಲಿಯೇ ಸಿಗುತ್ತಿದ್ದವು. ಉತ್ತಮವಾದ ಆಟದ ಮೈದಾನವಿತ್ತು. ಜಾತಿ-ಮತ-ಪಂಥದ ಭೇಧವಿರಲಿಲ್ಲ. ಪೊಲೀಸರ ಮಕ್ಕಳೆಲ್ಲರೂ ಒಟ್ಟಾಗಿ ಆಡುತ್ತಿದ್ದೆವು. ಬದುಕು ಮತ್ತು ಮನಸ್ಸಿನಲ್ಲಿ ನಿರಾಳತೆ ಹಾಗೂ ನಿಷ್ಕಲ್ಮಶ ಸ್ನೇಹ ಮಾತ್ರ ಮನೆ ಮಾಡಿತ್ತು. ನನ್ನ ನೆನಪಿನ ಶಕ್ತಿ ಅಗಾಧ. ನನ್ನ ಬಾಲ್ಯದ ಬಹುತೇಕ ನೆನಪುಗಳು, ಸಂಗತಿಗಳು ಇಂದಿಗೂ ನನ್ನ ಮನಸಲ್ಲಿ ಹಸಿರಾಗಿದೆ.

Related posts

ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು.

ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು.

2004 ರಲ್ಲಿ ಶ್ರೀರಾಮುಲು ಶಾಸಕರಾದರು. ನಮ್ಮಣ್ಣ ಸೋಮಶೇಖರ ರೆಡ್ಡಿ ಮೇಯರ್ ಆದರು. ದೊಡ್ಡಣ್ಣ ಕರುಣಾಕರ ರೆಡ್ಡಿ ಲೋಕಸಭಾ ಸದಸ್ಯರಾಗಿದ್ದರು. ಈ ಮಧ್ಯೆ ಶ್ರೀರಾಮುಲು ಜನಪ್ರಿಯತೆ...

Posted
1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...

Posted
ಸಮಯಕ್ಕೆ ಬೆಲೆ ಕಟ್ಟಲಾಗದು.

ಸಮಯಕ್ಕೆ ಬೆಲೆ ಕಟ್ಟಲಾಗದು.

ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು 13 ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು...

Posted

Leave a Reply