ಟ್ರಾಕ್ ದಾಟಿ ಬೆಳೆದ ಸ್ನೇಹ ಸಂಬಂಧ
ಪೊಲೀಸ್ ಕ್ವಾಟ್ರ್ರಸ್ ಪಕ್ಕದಲ್ಲಿಯೇ ರೈಲ್ವೆ ಟ್ರಾಕ್ ಇತ್ತು. ಅದರಾಚೆಗೆ ರೈಲ್ವೆ ಕ್ವಾಟ್ರ್ರಸ್ ಇತ್ತು. ಶ್ರೀರಾಮುಲು ಅವರ ತಂದೆ ಬಿ. ತಿಮ್ಮಪ್ಪನವರು ರೈಲ್ವೇ ಇಲಾಖೆಯಲ್ಲಿ ನೌಕರರಾಗಿದ್ದರು, ಅವರ ಪತ್ನಿ ಹೊನ್ನೂರಮ್ಮ. ಮಾತೃ ವಾತ್ಸಲ್ಯಕ್ಕೆ ಹೆಸರಾದವರು. ಈ ಕಡೆ ನಮ್ಮ ತಂದೆ ಪೊಲೀಸ್ ಆಗಿದ್ದ ಕಾರಣ ನಮ್ಮ ಮನೆ ಪೆÇಲೀಸ್ ಕ್ವಾಟ್ರ್ರಸ್ನಲ್ಲಿತ್ತು. ಈ ಮಧ್ಯೆ ನಾವು 8-10 ವರ್ಷದವರಿದ್ದಾಗ ಗೆಳೆಯರಾದೆವು. ಆಟಗಳೇ ನಮ್ಮನ್ನು ಹತ್ತಿರವಾಗಿಸಿದ ಸ್ನೇಹಸೇತುವೆ ಎಂದರೆ ತಪ್ಪಾಗಲಾರದು. ಶ್ರೀ ರಾಮುಲು 17 ವರ್ಷದವನಾಗಿದ್ದಾಗ ಅವರ ಮನೆಯಲ್ಲಿ ದುರ್ಘಟನೆ ನಡೆಯಿತು. ಅವರ ಸೋದರ ಮಾವನ ಹತ್ಯೆಯಾಯ್ತು. ಅನಂತರ ಶ್ರೀರಾಮುಲು ಅವರ ಜೀವಕ್ಕೂ ಅಪಾಯವಿತ್ತು. ಈ ಕಾರಣಕ್ಕಾಗಿ ನಾನು ಆತನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಂಡೆ. ಅಂದಿನಿಂದ ಈ ಕ್ಷಣದ ತನಕ ನನ್ನ ಬದುಕಿನ ಎಲ್ಲಾ ಏರಿಳಿತಕ್ಕೂ ಆತ ಸಾಕ್ಷಿಯಾಗಿದ್ದಾನೆ. ನನ್ನೆಲ್ಲಾ ಕಷ್ಟ-ಸುಖಗಳಿಗೂ ಸ್ಪಂದಿಸಿದ್ದಾನೆ. ಆತನ ಸ್ನೇಹ ನಾನು ಸಂಪಾದಿಸಿದ ಬಹುದೊಡ್ಡ ಆಸ್ತಿ.