ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು.

2004 ರಲ್ಲಿ ಶ್ರೀರಾಮುಲು ಶಾಸಕರಾದರು. ನಮ್ಮಣ್ಣ ಸೋಮಶೇಖರ ರೆಡ್ಡಿ ಮೇಯರ್ ಆದರು. ದೊಡ್ಡಣ್ಣ ಕರುಣಾಕರ ರೆಡ್ಡಿ ಲೋಕಸಭಾ ಸದಸ್ಯರಾಗಿದ್ದರು. ಈ ಮಧ್ಯೆ ಶ್ರೀರಾಮುಲು ಜನಪ್ರಿಯತೆ ಗಗನಮುಖಿಯಾಗಿತ್ತು. ಬಳ್ಳಾರಿಯಲ್ಲಿ ಪ್ರತಿ ವ್ಯಕ್ತಿ ಕೂಡ ಶ್ರೀರಾಮುಲು ಅವರನ್ನು ಪ್ರೀತಿಸಲು ಆರಂಭಿಸಿದರು. ನಮ್ಮ ತಾಯಿ ತೀರಿಕೊಂಡ ಸಂದರ್ಭದಲ್ಲಿ ಶ್ರೀರಾಮುಲು ತಮ್ಮ ತಾಯಿ ತೀರಿಕೊಂಡರು ಎಂದು ಹೇಳಿಕೆ ಕೊಟ್ಟಿದ್ದರು. ಜನರೆಲ್ಲ ಅವರ ಮನೆ ಮುಂದೆ ಸೇರಿದ್ದರು. ಶ್ರೀರಾಮುಲು ಅದ್ಯಾವ ಮಟ್ಟಿಗೆ ನಮ್ಮ ತಾಯಿಯನ್ನು ಗೌರವಿಸುತ್ತಿದ್ದರೆಂದರೆ ‘ನನ್ನ ತಾಯಿಯನ್ನು ತಮ್ಮ ತಾಯಿ’ ಅಂತ ಕರೆದದ್ದೇ ಸಾಕ್ಷಿ. ನನ್ನಮ್ಮ ಕೂಡ ಶ್ರೀರಾಮುಲು ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ಶ್ರೀರಾಮುಲು ಎಲೆಕ್ಷನ್‍ನಲ್ಲಿ ಸೋತಾಗ ಸುಷ್ಮಾ ಸ್ವರಾಜ್ ಅವರು ನಮ್ಮ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ನನ್ನ ಅಮ್ಮ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಒಂದೆರಡು ಮೂರು ದಿನ ಆತ ಊರಿನಲ್ಲಿಲ್ಲವೆಂದರೆ ಅಮ್ಮನಿಗೆ ಬೇಸರವಾಗೋದು. ಆ ಮಟ್ಟಿನ ಮಾತೃ ವಾತ್ಸಲ್ಯ ಅಮ್ಮನಲ್ಲಿತ್ತು. ಅಮ್ಮನ ಧೈರ್ಯ, ಆತ್ಮವಿಶ್ವಾಸವೇ ನಮ್ಮ ಕುಟುಂಬದ ಶಕ್ತಿಯಾಗಿತ್ತು. ಆದರೆ ನಮ್ಮ ಬದುಕಿನ ಒಳ್ಳೆಯ ದಿನಗಳನ್ನು ನೋಡಲು ಅಮ್ಮ ಇರಲಿಲ್ಲ ಎಂಬ ಬೇಸರವಿದೆ. ಹೇಮರೆಡ್ಡಿ ಮಲ್ಲಮ್ಮನನ್ನು ನೆನೆಸಿಕೊಂಡೇ ಅಮ್ಮ ದಿನ ಆರಂಭಿಸುತ್ತಿದ್ದರು. ಅಡುಗೆ ಮಾಡುವ ಮೊದಲು ಒಲೆಯನ್ನು ತೊಳೆದು ಅದಕ್ಕೆ ವಿಭೂತಿ ಹಚ್ಚಿ ‘ಅನ್ನ ಎಂಬುದು ಅನ್ನಪೂರ್ಣೆ’ ಎಂದು ನಮಸ್ಕರಿಸಿಯೇ ಅಡುಗೆ ಆರಂಭಿಸುತ್ತಿದ್ದರು. ಇನ್ನು ಅಮ್ಮ ಕೊನೆಯ ದಿನಗಳ ತನಕವು ಅಡುಗೆ ಮಾಡಿ ಮನೆಗೆ ಬಂದವರಿಗೆ ಉಣಬಡಿಸುವುದರಲ್ಲಿ ಖುಷಿ ಪಡುತ್ತಿದ್ದರು. ನಮಗೆಷ್ಟೇ ಸ್ಥಿತಿವಂತಿಕೆ ಬಂದರೂ ಅಮ್ಮನೇ ಅಡುಗೆ ಮಾಡುತ್ತಿದ್ದರು. ಇನ್ನೊಬ್ಬರ ಹೊಟ್ಟೆ ಹಸಿವನ್ನು ತಣಿಸುವುದರಲ್ಲಿ ಅಮ್ಮನಿಗೆ ಸಾರ್ಥಕತೆ ಸಿಗುತ್ತಿತ್ತು. ಅಪ್ಪನ ಕೊನೆಯ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆದರೆ ಅಪ್ಪ ಸಾಯುವ ಸಂದರ್ಭದಲ್ಲಿ ಯಾರೊಬ್ಬರ ಹತ್ತಿರವು ಹಣದ ಋಣ ಉಳಿಸಿಕೊಂಡಿರಲಿಲ್ಲ. ನಮ್ಮ ತಂದೆ-ತಾಯಿ ಇಬ್ಬರದು ಸಹ ಹೆಂಗರುಳು. ಕಷ್ಟ ಎಂದು ಬಂದವರನ್ನು ಎಂದು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ನಾವು ಮಾಡಿದ ದಾನ-ಧರ್ಮ ನಮ್ಮನ್ನು ಕಷ್ಟದಲ್ಲಿ ಕಾಯುತ್ತೆ ಎನ್ನುವ ನಂಬಿಕೆ ಅಪ್ಪ-ಅಮ್ಮನಲ್ಲಿತ್ತು. ಅದು ನನ್ನ ಅನುಭವಕ್ಕೂ ಬಂದಿದೆ. ಹೆತ್ತವರ ಗುಣಗಳು ಮಕ್ಕಳಲ್ಲಿ ಕಂಡು ಬರುವುದು ಸಾಮಾನ್ಯ. ನನ್ನ ವಿಷಯದಲ್ಲಿ ಹೇಳುವುದಾದರೆ ಅಮ್ಮನಿಂದ ನನಗೆ ಸೂಪರ್ ಮೆಮೋರಿ ಪವರ್ ಬಂದಿದೆ, ಅಪ್ಪನಿಂದ ನನಗೆ ಧೈರ್ಯ ಬಂದಿದೆ ಎನಿಸುತ್ತದೆ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಒಟ್ಟಾರೆ 35 ವರ್ಷ. ಅದರಲ್ಲಿ 2 ವರ್ಷ ಮೈಸೂರು, 9 ವರ್ಷ ಹೊಸಪೇಟೆ, 1 ವರ್ಷ ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಜಿಲ್ಲೆಯಲ್ಲಿಯೇ ವೃತ್ತಿ ಜೀವನದ ಉಳಿದ 23 ವರ್ಷ ಕಳೆದರು. ಹೀಗಾಗಿ ಪೊಲೀಸ್ ಚೆಂಗಾರೆಡ್ಡಿ ಎಂದರೆ ಬಳ್ಳಾರಿಯಲ್ಲಿ ಎಲ್ಲರಿಗೂ ಚಿರಪರಿಚಿತ. ಶ್ರೀರಾಮುಲು 16-17 ವರ್ಷದವನಾಗಿದ್ದಾಗಲೇ ನಾನು ಆತನಲ್ಲಿ ನಾಯಕತ್ವದ ಗುಣಗಳನ್ನು ಗುರುತಿಸಿದ್ದೆ. ದೇವರು ಮಾಡೋ ವಿಚಿತ್ರಗಳು ಹೇಗಿರುತ್ತೆ..? ಒಬ್ಬ ಸಾಮಾನ್ಯ ಮನುಷ್ಯ ಕೂಡ ಪ್ರಭಾವಶಾಲಿ ವ್ಯಕ್ತಿ ತಪ್ಪು ದಾರಿ ತುಳಿದಾಗ ಆತನನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬುದಕ್ಕೆ ನಮಗಾದ ಅನುಭವಗಳೇ ಸಾಕ್ಷಿ. ಆ ದಿನಗಳಲ್ಲಿ ನಮ್ಮದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬವಾಗಿತ್ತು. ಯಾವುದೇ ರಾಜಕೀಯ ಇತಿಹಾಸ ನಮಗಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ನಾವು ಜನಸೇವೆಯಲ್ಲಿ ತೊಡಗಿದ್ದು ಸಹ ದೈವೇಚ್ಛೆ ಎನಿಸುತ್ತದೆ.

Related posts

ಸಚಿವ ಸ್ಥಾನ ನಾನು ಬಯಸದೇ ಬಂದ ಭಾಗ್ಯ

ಸಚಿವ ಸ್ಥಾನ ನಾನು ಬಯಸದೇ ಬಂದ ಭಾಗ್ಯ

ನಾನು ಸಚಿವನಾಗಬಹುದು ಎಂದು ಕನಸು ಕಂಡವನಲ್ಲ. ನಾನು ಸಚಿವನಾಗಿದ್ದು ಸಹ ಅನಿರೀಕ್ಷಿತ ಸಂದರ್ಭದಲ್ಲಿ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ವಿಶೇಷ ಸಂಗತಿಯೆಂದರೆ ನಾನು...

Posted
ಸತ್ಯ ದರ್ಶನ

ಸತ್ಯ ದರ್ಶನ

ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನ ಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ...

Posted
1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...

Posted

Leave a Reply