ಅಪ್ಪ ನಮ್ಮನ್ನು ಮೆಚ್ಚಿ ಬೆನ್ನು ತಟ್ಟಿದ್ದು ಈ ಕಾರಣಕ್ಕೆ

ಬಳ್ಳಾರಿಯ ಸಂಸ್ಕೃತಿಯ ಸೊಗಡಿತ್ತು. ಪ್ರತಿ ಹಳ್ಳಿಗೂ ಒಂದು ತಾಂಡ ಇರುತ್ತಿತ್ತು. ನಮ್ಮ ಅನೇಕ ಸ್ನೇಹಿತರು ಆ ತಾಂಡಾಗಳಲ್ಲೇ ವಾಸಿಸುತ್ತಿದ್ದರು. ಇನ್ನು ಅವರಲ್ಲಿ ಕೆಲವರಿಗೆ ಮನೆಯಲ್ಲಿ ವಿಪರೀತ ಆರ್ಥಿಕ ಸಂಕಷ್ಟವಿತ್ತು. ಆ ಸಂದರ್ಭದಲ್ಲಿ ಪ್ರತಿ ವಾರಾಂತ್ಯ ಕಾಡಿಗೆ ಹೋಗಿ ಮುಳ್ಳಿನ ಕಟ್ಟಿಗೆ ಕಡಿದು ತಂದು ಸೌದೆ ಒಲೆ ಉರಿಗಾಗಿ ಬಳಸುತ್ತಿದ್ದರು. ಹೀಗೆ ಮಾಡುವುದರಿಂದ ಮನೆಯವರ ಕಷ್ಟಕ್ಕೆ ನೆರವಾದಂತಾಗುತ್ತದೆ ಎಂಬುದು ಅವರ  ಉದ್ದೇಶವಾಗಿತ್ತು. ಆಗ ಅವರ ಹೆತ್ತವರು ತಮ್ಮ ಮಕ್ಕಳಿಗೆ ಜೋಳದ ರೊಟ್ಟಿ, ಖಾರದ ಪುಡಿ ಮತ್ತು ಮೊಸರನ್ನು ಕಟ್ಟಿ ಕೊಡುತ್ತಿದ್ದರು. ಯಾಕಂದ್ರೆ ಬೆಳಿಗ್ಗೆ ಸೌದೆಗಾಗಿ ಕಾಡು ಹೊಕ್ಕರೆ ಮನೆಗೆ ಮರಳುವುದು ರಾತ್ರಿಯಾಗುತ್ತಿತ್ತು. ಬರೋಬ್ಬರಿ ಮೂವತ್ತು ಮಂದಿ ಹುಡುಗರು ನಮ್ಮೊಟ್ಟಿಗೆ ಇರುತ್ತಿದ್ದರು. ನಾನು ಹಾಗೂ ನನ್ನ ಇಬ್ಬರು ಅಣ್ಣಂದಿರು ಆ ಹುಡುಗರಿಗೆ ನಮ್ಮ ಕೈಲಾದ ಮಟ್ಟಿಗೆ ಸೌದೆ ಹೊಂದಿಸಿಕೊಡುವುದರ ಮೂಲಕ ಸಹಾಯ ಮಾಡುತ್ತಿದ್ದೆವು. ಆದರೆ ಈ ವಿಷಯವನ್ನು ನಮ್ಮ ತಂದೆಯಿಂದ ಮುಚ್ಚಿಟ್ಟಿದ್ದೆವು. ಹಾಗಾಗಿ ಕೆಲವೊಮ್ಮೆ ನಾವು ಮನೆಗೆ ತಡವಾಗಿ ಹಿಂದಿರುಗಿದರೆ ನಮ್ಮ ತಾಯಿ ಗಾಬರಿಯಾಗುತ್ತಿದ್ದರು. ಸ್ವಲ್ಪ ದಿನಗಳ ನಂತರ ನಮ್ಮ ತಂದೆಗೆ ಹೀಗೆ ನಾವು ಮೂರು ಮಕ್ಕಳು ಕಾಡಿಗೆ ಹೋಗಿ ಕಟ್ಟಿಗೆ ಹೊಂದಿಸಲು ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿದ ಮೇಲೆ ತುಂಬಾನೇ ಖುಷಿ ಪಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ನಾಲ್ಕು ಮಂದಿಗೆ ಸಹಾಯ ಮಾಡುವ ಮನೋಭಾವ ಇದೆಯೆಲ್ಲಾ.. ಎಂದು ಸಂತಸ ಪಟ್ಟು ನಮ್ಮ ಬೆನ್ನು ತಟ್ಟಿದ್ದರು. ಆದರೆ ನಿಜದಲ್ಲಿ ಹೇಳಬೇಕೆಂದರೆ ಈ ಸನ್ನಡತೆಗಳೆಲ್ಲ ನಮ್ಮ ತಂದೆ-ತಾಯಿ ಕಲಿಸಿಕೊಟ್ಟ ಸಂಸ್ಕಾರದಿಂದಲೇ ನಮ್ಮೊಳಗೆ ಜಾಗೃತವಾದಂಥವು.

Related posts

ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...

ಬಳ್ಳಾರಿಯೊಡನೆ ಬೆಸೆಯಿತು ಬಂಧ

ಬಳ್ಳಾರಿಯೊಡನೆ ಬೆಸೆಯಿತು ಬಂಧ

ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು...

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಸಿನಿಮಾ ಮೇಲಿನ ನನ್ನ ಮೋಹ ಎಷ್ಟರ ಮಟ್ಟಿಗೆ ಇದೆಯೆಂದರೆ ನಾನು ಮಂತ್ರಿಯಾದ ಬಳಿಕವು ನನ್ನ ಬಹು ನಿರೀಕ್ಷೆಯ ಚಿತ್ರಗಳು ತೆರೆ ಕಂಡಾಗ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದುಂಟು. ಆದರೆ...

Leave a Reply