ಅಟಲ್ ಜೀ ಅವರೊಡನೆ ಕಳೆದ ಕ್ಷಣಗಳೆಲ್ಲ ಅಮೂಲ್ಯ

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವ ಕಂಡ ಧೀಮಂತ ನಾಯಕ. ಭಾರತ ದೇಶಕ್ಕೆ ತಮ್ಮ ಸಮರ್ಥ ಆಡಳಿತದಿಂದ ಹೊಸ ರೂಪ ನೀಡಿದವರು. ಜನರ ಆಶಯಗಳನ್ನು ಪೂರೈಸುತ್ತಲೇ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದ ಜನಪ್ರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆ ಶ್ರೀಮಾನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಲ್ಲುತ್ತದೆ. ತಮ್ಮ ಸರಳತೆಯಿಂದಲೇ ಎಲ್ಲರ ಪ್ರೀತಿಗೆ ಪಾತ್ರವಾದರು. ಅಜಾತಶತ್ರು ಅಂತಲೇ ಅವರು ಜನಜನಿತರಾಗಿರುವುದೇ ಇದಕ್ಕೆ ನಿದರ್ಶನ. 1999 ರಲ್ಲಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಲೋಕಸಭೆಗೆ ಬಿಜೆಪಿಯ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿಯವರ ವಿರುದ್ಧ ಕಣಕ್ಕಿಳಿದಿದ್ದರು. ಅದೇ ವೇಳೆ ಶ್ರೀರಾಮುಲು ಅವರು ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಪಕ್ಷದ ಪರವಾಗಿ ಪ್ರಚಾರ ಭಾಷಣ ಮಾಡಲು ನಮ್ಮ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಬಳ್ಳಾರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ವಾಜಪೇಯಿಯವರಂಥ ಮಹಾನ್ ನಾಯಕರೊಡನೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸೌಭಾಗ್ಯ ನಮ್ಮದಾಯ್ತು. ಅಟಲ್ ಜೀ ಅವರೊಡನೆ ಒಂದಷ್ಟು ಅಮೂಲ್ಯ ಸಮಯವನ್ನು ಕಳೆಯುವ ಸದಾವಕಾಶ ನನಗೆ ಸಿಕ್ಕಿತ್ತು. ಅವರೊಡನೆ ಕಳೆದ ಅಷ್ಟು ಸಮಯ ನನ್ನ ಪಾಲಿಗೆ ಅವಿಸ್ಮರಣೀಯ.

Related posts

ಸತ್ಯ ದರ್ಶನ

ಸತ್ಯ ದರ್ಶನ

ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನ ಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ...

Posted
ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...

Posted
ಸಮಯಕ್ಕೆ ಬೆಲೆ ಕಟ್ಟಲಾಗದು.

ಸಮಯಕ್ಕೆ ಬೆಲೆ ಕಟ್ಟಲಾಗದು.

ಒಂದು ಸಾರಿ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಬರಲು 13 ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಮತ್ತೆ ಅಲ್ಲಿಂದ ಬಳ್ಳಾರಿಗೆ ಮರಳಲು ಅಷ್ಟೇ ಸಮಯ ಹಿಡಿಯುತ್ತಿತ್ತು. ನಾನು...

Posted
ನನ್ನ ಪತ್ನಿಯ ಧೈರ್ಯಕ್ಕೆ ಸಲಾಂ

ನನ್ನ ಪತ್ನಿಯ ಧೈರ್ಯಕ್ಕೆ ಸಲಾಂ

ನನ್ನ ಪತ್ನಿ ಅರುಣಾದೇವಿ. ಅರುಣಾದೇವಿ ಎಂಬುದು ಆಕೆಯ ಮೂಲ ಹೆಸರು. ಮದುವೆಯ ನಂತರ ನನ್ನ ಹೆಸರಿಗೆ ಹೊಂದುವಂತೆ ಲಕ್ಷ್ಮೀ ಅರುಣಾ ಎಂದು ಬದಲಿಸಲಾಯಿತು.  ಕರ್ನೂಲು ಜಿಲ್ಲೆಯ ನಂದ್ಯಾಲ...

Leave a Reply