1989 ರಲ್ಲಿ ಬದುಕು ಬದಲಾಯ್ತು
1989 ರಲ್ಲಿ ಬದುಕು ಬದಲಾಯ್ತು
1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ ಹೆಡ್ ಆಫೀಸ್ ಆಗಿಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಹಂತ ಹಂತವಾಗಿ ಸಂಸ್ಥೆಯನ್ನು ವಿಸ್ತರಿಸುತ್ತಾ ಹೋದೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ 125 ಬ್ರಾಂಚ್ಗಳನ್ನು ಆರಂಭಿಸಿದೆ. ಇದರಿಂದ 4000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಯ್ತು. 1989 ರಿಂದ 2003 ರ ತನಕ 14 ವರ್ಷಗಳ ಕಾಲ ನನ್ನ ಫೈನಾನ್ಸ್ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿದೆ. ಯಾವತ್ತಿಗೂ ನನ್ನ ಸಂಸ್ಥೆ ಆರ್ಬಿಐ ನಿಯಮಾವಳಿಗಳನ್ನು ಗಾಳಿಗೆ ತೂರಲಿಲ್ಲ. ಯಾರೊಬ್ಬರಿಗೂ ಮೋಸ ಮಾಡದೇ ಪ್ರಾಮಾಣಿಕವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಈ 14 ವರ್ಷದ ಅವಧಿಯಲ್ಲಿ ದೇಶದಲ್ಲಿ ಸಾವಿರಾರು ಫೈನಾನ್ಸ್ ಕಂಪೆನಿಗಳು ದಿವಾಳಿಯಾದವು. ಆರ್ಬಿಐ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಗ್ರಾಹಕರನ್ನು ವಂಚಿಸಿದವು. ಆದರೆ ನಾನು ನನ್ನ ಸಂಸ್ಥೆಯ ಪ್ರತಿ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡೆ. ಆ ಬಗ್ಗೆ ಇಂದಿಗೂ ನನಗೆ ಹೆಮ್ಮೆಯಿದೆ.

MY BLOG
ಶ್ರೀ ಗಾಲಿ ಜನಾರ್ಧನ ರೆಡ್ಡಿ –
ಜನರ ಅಂತರಂಗದಲ್ಲಿರುವ ಜನನಾಯಕನ ಅಂತರ್ಜಾಲ ತಾಣ

ನನ್ನೂರು, ನನ್ನ ಬಾಲ್ಯ
ನನ್ನೂರು, ನನ್ನ ಬಾಲ್ಯ
ನನ್ನ ಜನ್ಮಸ್ಥಾನ ಬಳ್ಳಾರಿ. ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ ದುರ್ಗಮ್ಮ ಸಿಡಿಬಂಡೆ ಜಾತ್ರೆ ಹಾಗೂ ಕೋಟೆ ಮಲ್ಲೇಶ್ವರ ರಥೋತ್ಸವ ನೆನಪಾಗುತ್ತದೆ. ಅಲ್ಲದೇ ಬಳ್ಳಾರಿಯ ರಥಬೀದಿಯ ವೈಭವ ಕಣ್ಮುಂದೆ ಮರುಕಳಿಸುತ್ತದೆ. ಚಿಕ್ಕಂದಿನಲ್ಲಿ ನಾವು ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದ ಆ ಎರಡು ದಿನಗಳನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಮ್ಮೆಲ್ಲರನ್ನು ಅಪ್ಪ, ಅಮ್ಮ ಜಾತ್ರೆಗೆ ಕರೆದೊಯ್ಯುತ್ತಿದ್ದರು. ಅಪ್ಪ ಕೊಡಿಸುತ್ತಿದ್ದ ಆಟದ ಸಾಮಾನುಗಳು ನೀಡುತ್ತಿದ್ದ ಖುಷಿಯೇ ಬೇರೆ. ಅಲ್ಲಿ ಒಟ್ಟಾಗಿ ಕುಳಿತು ಬಿಸಿ ಬಿಸಿ ಮಿರ್ಚಿ ಮಂಡಕ್ಕಿ ತಿಂದ ಕ್ಷಣ ಈ ಹೊತ್ತಿಗೂ ತುಂಬಾನೇ ನೆನಪಾಗುತ್ತದೆ. ಇಂದು ನಾವು ದೇಶ ದೇಶಗಳನ್ನು ಸುತ್ತಿ ಬಂದರೂ ಬಾಲ್ಯದ ನೆಮ್ಮದಿ ಮತ್ತೆಲ್ಲೂ ಕಾಣ ಸಿಗುವುದಿಲ್ಲ.